ಹಸಿದವರ ಹೊಟ್ಟೆ ತುಂಬಿಸವ ಮೂಲಕ ಮಾನವೀಯತೆ ಮೆರೆದ ಕುಣಿಗಲ್ ಯುವಕಾಂಗ್ರೆಸ್ ...!
ಕುಣಿಗಲ್ : ದೇಶವೇ ಕರೋನ ಎರಡನೇ ಅಲೆಗೆ ತತ್ತರಿಸಿಹೋಗಿರುವ ಸಂದರ್ಭದಲ್ಲಿ ತಾಲೂಕಿನ ಯುವ ಕಾಂಗ್ರೆಸ್ ವತಿಯಿಂದ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯಕ್ರಮಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲೋಹಿತ್ ರವರ ನೇತೃತ್ವದಲ್ಲಿ ಇಂದು ತಾಲೂಕಿನ ಸರಕಾರಿ ಆಸ್ಪತ್ರೆಯ ಕೋವಿಡ್ ರೋಗಿಗಳು ಹಾಗೂ ಸಾರ್ವಜನಿಕರಿಗೆ ಉಚಿತ ಆಹಾರ ಪಟ್ಟಣಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಕ್ಷೇತ್ರದ ಶಾಸಕರಾದ ಡಾ.ರಂಗನಾಥ್ ರವರ ಮಾರ್ಗದರ್ಶನದಂತೆ ನಾವು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿ ಸಾರ್ವಜನಿಕರಿಗೆ ಹಾಗೂ ಕರೋನ ಸೋಂಕಿತರಿಗೆ ಆಹಾರ ಪಟ್ಟಣಗಳನ್ನು ನೀಡಿದ್ದೇವೆ. ಸಾರ್ವಜನಿಕರ ಅನಾವಶ್ಯಕ ಹೊರಗೆ ಬರಬೇಡಿ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ ಆದಷ್ಟು ಜಾಗೃತರಾಗಿರಿ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಚಲಮಸಂದ್ರ ಸಂತು, ಗ್ರಾಮ ಪಂಚಾಯ್ತಿ ಸದಸ್ಯರಾದ ಉಮೇಶ್ ಗೌಡ ಹಾಗೂ ಇತರರು ಇದ್ದರು.