ಅಕ್ಟೋಬರ್ 1 ರಂದು ಬೃಹತ್ ಆರೋಗ್ಯ ಶಿಬಿರ...!
ಕುಣಿಗಲ್: ಪಂಡಿತ್ ದೀನದಯಾಳ್ ಉಪಾಧ್ಯಾಯ ರವರ ಜನ್ಮ ದಿನದ ಸ್ಮರಣಾರ್ಥ ಅಂಗವಾಗಿ ತಾಲೂಕಿನ ಪಟ್ಟಣದಲ್ಲಿ ಹೆಚ್.ಡಿ ರಾಜೇಶ್ ಗೌಡ ಸೇವಾ ಪ್ರತಿಷ್ಠಾನ ರಿ. ಇವರ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಹಕಾರದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಇದನ್ನು ಕುಣಿಗಲ್ ತಾಲೂಕಿನ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಮಾಜ ಸೇವಕರು ಹಾಗೂ ಬಿಜೆಪಿ ಮುಖಂಡರಾದ ಹೆಚ್.ಡಿ ರಾಜೇಶ್ ಗೌಡರವರು ತಿಳಿಸಿದರು. ದಿನಾಂಕ 01-10-2021 ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಟ್ಟಳ್ಳಿ ಮಠ ಕಾಲೇಜು ಆವರಣ ಸಂತೆಪೇಟೆ ಹುತ್ರಿದುರ್ಗ ಹೋಬಳಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಇದರ ಅಂಗವಾಗಿ ಇಂದು ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ರಾಜೇಶ್ ಗೌಡರವರು ಅತ್ಯುತ್ತಮ ಸುಸಜ್ಜಿತವಾದ ಆಸ್ಪತ್ರೆ ಮಾದರಿಯ ರೀತಿಯಲ್ಲಿ ಟೆಂಟುಗಳ ನಿರ್ಮಾಣವಾಗುತ್ತಿದ್ದು ಅದನ್ನು ಪರಿಶೀಲಿಸಿ ಮಾತನಾಡಿದರು.