ಕುಣಿಗಲ್ ತಾಲೂಕಿನ ಮನೆ ಮಗ ಖ್ಯಾತ ನಿರ್ಮಾಪಕ "ರಾಮು " ಕರೋನಗೆ ಬಲಿ...!
ಬೆಂಗಳೂರು: ನಟಿ ಮಾಲಾಶ್ರೀ ಪತಿ ಕೋಟಿ ರಾಮು ಅವರು ಕೊರೊನಾದಿಂದಾಗಿ ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಹಿನ್ನೆಲೆ ರಾಮು ಅವರು ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದ್ದು ಅವರ ಕೊರೊನಾ ಸೋಂಕು ವರದಿ ಪಾಸಿಟಿವ್ ಬಂದಿತ್ತು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ರಾಮು ಅವರು.. ಕನ್ನಡದ ಎಕೆ 47, ಬಾವ ಬಾಮೈದ, ದುರ್ಗಿ, ಗೂಳಿ, ರಾಜ್ವಿಷ್ಣು ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ಮಾಪಕರಾಗಿದ್ದರು.