ಕುಣಿಗಲ್ ಬಂದ್ ಯಶಸ್ವಿ...!
ಕುಣಿಗಲ್ : ಸುಧಾರಣಾ ಕಾಯ್ದೆ , ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಹಲವಾರು ಸಂಘಟನೆಗಳು ನಡೆಸುತ್ತಿರು ಬಂದ್ ಕುಣಿಗಲ್ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣೆ, ಎಪಿಎಂಸಿ ಕಾಯ್ದೆ , ಶಿಕ್ಷಣ ಸೇರಿದಂತೆ ಹಲವಾರು ಕಾಯ್ದೆಗಳ ವಿರುದ್ಧ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ತಾಲೂಕಿನ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕುಣಿಗಲ್ ತಾಲೂಕಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದ ಸಂದರ್ಭ ಅಂಗಡಿಗಳು , ಹೋಟೆಲ್ ಗಳು ಮುಚ್ಚಿದ್ದವು ಬಸ್ಸುಗಳ ಸಂಚಾರ ವಿರಳವಾಗಿತ್ತು. ಪ್ರತಿಭಟನೆಯಲ್ಲಿ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ತಾಲೂಕು ರೈತ ಸಂಘದ ಅಕ್ಷರದ ಅನಿಲ್ ಕುಮಾರ್ , ಲಕ್ಷ್ಮಣಗೌಡ ದಲಿತ ಸಂಘರ್ಷ ಸಮಿತಿಯ ಶಿವಶಂಕರ್ ಚಿಕ್ಕಣ್ಣ , ಅಬ್ದುಲ್ ಮುನಾಫ್ ಡಾಕ್ಟರ್ ರಾಜಕುಮಾರ್ ಸಂಘದ ಅಧ್ಯಕ್ಷ ರಂಗಸ್ವಾಮಿ , ಕರವೇ ಅಧ್ಯಕ್ಷ ಮಂಜುನಾಥ್ , ಕನ್ನಡ ಸೇನೆಯ ಶ್ರೀನಿವಾಸ್ , ಪ್ರಗತಿಪರ ಚಿಂತಕ ಜಿ.ಕೆ ನಾಗಣ್ಣ ಸೇರಿದಂತೆ ಹಲವು ಮಂದಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.