ಕೇಂದ್ರ ರೈಲ್ವೇ ಖಾತೆ ಸಚಿವ ಸುರೇಶ್ ಅಂಗಡಿಯವರ ಸಾವಿನ ಸುದ್ದಿ ಕೇಳಿ ನಿಜಕ್ಕೂ ಆಘಾತಕ್ಕೊಳಗಾಗಿದ್ದೇನೆ ಎಂದು ಕುಣಿಗಲ್ ಶಾಸಕ ಡಾ||ರಂಗನಾಥ್ ಹೇಳಿದ್ದಾರೆ. ಸುರೇಶ್ ಅಂಗಡಿ ಅನುಭವಿ ರಾಜಕಾರಣಿಯಾಗಿದ್ರು.
ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಎಕ್ಸ್ಪ್ರೆಸ್ ರೈಲುಗಳು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮಾಡುವಂತೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಅವರು ಕೂಡ ನನ್ನ ಮನವಿಗೆ ಸ್ಪಂದಿಸಿದ್ರು. ಅವರನ್ನು ಕಳೆದುಕೊಂಡಿದ್ದು ತುಂಬಾ ದುಖಃವಾಗುತ್ತಿದೆ. ಅವರ ಸಾವಿನಿಂದ ರಾಜ್ಯಕ್ಕೆ ಹಾಗೂ ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಕುಣಿಗಲ್ : ಕುಖ್ಯಾತ ಸರಗಳ್ಳನನ್ನು ತುಮಕೂರಿನ ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಮದ್ದೂರಿನ ಇಮ್ರಾನ್ ಖಾನ್ (24) ಬಂಧಿತ ಆರೋಪಿ. ಈತ ಮಂಡ್ಯ, ತುಮಕೂರು ಸೇರಿದಂತೆ ಹಲವು ಕಡೆ ತನ್ನದೇ ಒಂದು ತಂಡ ಕಟ್ಟಿಕೊಂಡು ಸರಗಳ್ಳತನ ಮಾಡ್ತಿದ್ದ. ರಸ್ತೆಯಲ್ಲಿ ಓಡಾಡುವ ಒಂಟಿ ಮಹಿಳೆಯರನ್ನೇ ಗುರಿಯಾಗಿರಿಸಿ ಕೃತ್ಯವೆಸಗುತ್ತಿದ್ದ. ಜೂನ್ 14 ರಂದು ಬೈಕ್ ನಲ್ಲಿ ಬಂದು ವಸಂತ ಎಂಬ ಮಹಿಳೆಯನ್ನು ತಳ್ಳಿ ಸರ ಎಗರಿಸಿದ್ದ. ತಲೆಗೆ ಪೆಟ್ಟು ಬಿದ್ದ ಕಾರಣ ವಂಸತ ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಣಿಗಲ್ ಪೊಲೀಸರು ಮೈಸೂರು ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಮ್ರಾನ್ ಖಾನ್ನನ್ನು ದಸ್ತಗಿರಿ ಮಾಡಿದ್ದಾರೆ. ಈ ಕುಖ್ಯಾತ ಸರಗಳ್ಳನ ಬಂಧನದಿಂದ 8 ಪ್ರಕರಣಗಳು ಬೆಳಕಿಗೆ ಬಂದಿವೆ.
ಚನ್ನರಾಯಪಟ್ಟಣ ಪಟ್ಟಣದಲ್ಲಿ ಶುಕ್ರವಾರ ನಡೆಯುವ ದನಗಳ ಸಂತೆಯಲ್ಲಿ ಮಾರಲು, ಜರ್ಸಿ ಹೋರಿಗರುಗಳನ್ನು ತಂದಿದ್ದ ರೈತರು, ಖರೀದಿಸುವವರಿಲ್ಲದೇ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ಯಾರೂ ಖರೀದಿಸಲು ಮುಂದೆ ಬರಲಿಲ್ಲ. ಕರುಗಳನ್ನು ತಂದ ರೈತರು ಅವುಗಳನ್ನು ವಾಪಸ್ ಒಯ್ಯದೇ ಕಟ್ಟಿದ್ದಲ್ಲಿಯೇ ಬಿಟ್ಟು ಹೋಗಿದ್ದರಿಂದ, 32 ಕರುಗಳು ಅನಾಥವಾಗಿ ನಿಂತಿದ್ದವು. ಬೆಳಿಗ್ಗೆಯಿಂದ ಆಹಾರವಿಲ್ಲದೇ, ಕರುಗಳು ಬಳಲಿದ್ದವು. ನಾಯಿಗಳು ಕಚ್ಚಿ ಸಾಯಿಸುತ್ತವೆ ಎಂಬ ಆತಂಕದಿಂದ ಅವುಗಳನ್ನು ವಾಹನದಲ್ಲಿ ತಂದು ತಾಲ್ಲೂಕು ಕಚೇರಿ ಆವರಣದಲ್ಲಿ ಬಿಡಲಾಯಿತು ಎಂದು ಸ್ಥಳೀಯರಾದ ಮಹೇಶ್ ತಿಳಿಸಿದರು. ಬಳಿಕ, ಅವುಗಳನ್ನು ತಾಲ್ಲೂಕು ಆಡಳಿತವು ಮೈಸೂರಿನ ಪಿಂಜರಪೋಳಗೆ ಕಳುಹಿಸುವ ವ್ಯವಸ್ಥೆ ಮಾಡಿತು.'ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೆ ಸಾಲದು. ರಾಸುಗಳನ್ನು ಸಾಕುವುದಕ್ಕಾಗಿ, ಸರ್ಕಾರವು ಗೋ ಶಾಲೆಗಳನ್ನು ತೆರೆಯಬೇಕಿತ್ತು. ಈ ಬಗ್ಗೆ ಚಿಂತಿಸದೇ ಕಾಯ್ದೆ ತಂದಿದ್ದು ತರವಲ್ಲ.
ಕುಣಿಗಲ್ : ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟವನ್ನು ಹಾರಿಸಲು ಡಾ.ಅಶ್ವತ್ ನಾರಾಯಣ್ ಮುಂದಾಗಿದ್ದಾರೆ. ತಾಲೂಕಿನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಮೂರು ಬಾರಿ ಸೋತ ಹಿನ್ನೆಲೆ ಈ ಬಾರಿ ಪಕ್ಷವನ್ನು ಕುಣಿಗಲ್ ತಾಲೂಕಿನಲ್ಲಿ ಅಧಿಕಾರಕ್ಕೆ ತರಲು ಹಾಗೂ ಹಾಲಿ ಕುಣಿಗಲ್ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿಕೆ ಸಹೋದರರ ಸಂಬಂಧಿ ಡಾ.ರಂಗನಾಥ್ ಶಾಸಕರಾಗಿದ್ದರೆ ಇವರನ್ನು ಈ ಬಾರಿ ಸೋಲಿಸಲೇಬೇಕು ಎಂಬ ಶತಾಯಗತಾಯ ಸೇಡಿನ ರಾಜಕೀಯಕ್ಕೆ ಡಾ.ಅಶ್ವಥ್ ನಾರಾಯಣ್ ' ಕೈ ' ನಾಯಕ ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಗಾಳ ಹಾಕಿ ಬಹುದೊಡ್ಡ ರಣತಂತ್ರ ಹೇಳದಿದ್ದರೆ. ಆಪ್ತ ವಲಯಗಳ ಮೂಲಕ ಡಾ.ಅಶ್ವಥನಾರಾಯಣ ಬೀಸಿರುವ ಬಲೆಗೆ ಮುದ್ದಹನುಮೇಗೌಡರು ಬಿದ್ದಂತೆ ಕಾಣುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕುಣಿಗಲ್ ತಾಲೂಕಿನಲ್ಲಿ ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಸಂದರ್ಭದಲ್ಲಿ ಬಹುತೇಕ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗುವ ವಿಶ್ವಾಸದೊಂದಿಗೆ ಮುದ್ದಾಹನುಮೆಗೌಡರು ಈಗಾಗಲೇ ಕ್ಷೇತ್ರದಲ್ಲಿ ಪ್ರತಿ ಹಳ್ಳಿಹಳ್ಳಿಗೂ ಸುತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ ನಾನು ಈಗ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಪಕ್ಷದಿಂದ ಟಿಕೆಟ್ ಕೇಳುತ್ತೇನೆ ಎಂದು ಎಸ್.ಪಿ.ಎಮ್ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದಾರೆ. ಕ್ಷೇತ್...
Comments
Post a Comment