ಹೋರಿಗರುಗಳನ್ನು ಸಂತೆಯಲ್ಲೇ ಬಿಟ್ಟು ಹೋದರು!
ಚನ್ನರಾಯಪಟ್ಟಣ ಪಟ್ಟಣದಲ್ಲಿ ಶುಕ್ರವಾರ ನಡೆಯುವ ದನಗಳ ಸಂತೆಯಲ್ಲಿ ಮಾರಲು, ಜರ್ಸಿ ಹೋರಿಗರುಗಳನ್ನು ತಂದಿದ್ದ ರೈತರು, ಖರೀದಿಸುವವರಿಲ್ಲದೇ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ಯಾರೂ ಖರೀದಿಸಲು ಮುಂದೆ ಬರಲಿಲ್ಲ. ಕರುಗಳನ್ನು ತಂದ ರೈತರು ಅವುಗಳನ್ನು ವಾಪಸ್ ಒಯ್ಯದೇ ಕಟ್ಟಿದ್ದಲ್ಲಿಯೇ ಬಿಟ್ಟು ಹೋಗಿದ್ದರಿಂದ, 32 ಕರುಗಳು ಅನಾಥವಾಗಿ ನಿಂತಿದ್ದವು.
ಬೆಳಿಗ್ಗೆಯಿಂದ ಆಹಾರವಿಲ್ಲದೇ, ಕರುಗಳು ಬಳಲಿದ್ದವು. ನಾಯಿಗಳು ಕಚ್ಚಿ ಸಾಯಿಸುತ್ತವೆ ಎಂಬ ಆತಂಕದಿಂದ ಅವುಗಳನ್ನು ವಾಹನದಲ್ಲಿ ತಂದು ತಾಲ್ಲೂಕು ಕಚೇರಿ ಆವರಣದಲ್ಲಿ ಬಿಡಲಾಯಿತು ಎಂದು ಸ್ಥಳೀಯರಾದ ಮಹೇಶ್ ತಿಳಿಸಿದರು. ಬಳಿಕ, ಅವುಗಳನ್ನು ತಾಲ್ಲೂಕು ಆಡಳಿತವು ಮೈಸೂರಿನ ಪಿಂಜರಪೋಳಗೆ ಕಳುಹಿಸುವ ವ್ಯವಸ್ಥೆ ಮಾಡಿತು.'ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೆ ಸಾಲದು. ರಾಸುಗಳನ್ನು ಸಾಕುವುದಕ್ಕಾಗಿ, ಸರ್ಕಾರವು ಗೋ ಶಾಲೆಗಳನ್ನು ತೆರೆಯಬೇಕಿತ್ತು. ಈ ಬಗ್ಗೆ ಚಿಂತಿಸದೇ ಕಾಯ್ದೆ ತಂದಿದ್ದು ತರವಲ್ಲ.
Comments
Post a Comment