ಕುಣಿಗಲ್ ತಾಲೂಕಿನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಲು ಡಾ.ಅಶ್ವತ್ ನಾರಾಯಣ್ ರಣತಂತ್ರ ಕೈ ನಾಯಕ ಮುದ್ದಹನುಮೇಗೌಡರಿಗೆ ಬಹುತೇಕ ಬಿಜೆಪಿ ಪಕ್ಷದಿಂದ ಟಿಕೆಟ್ ಖಚಿತ ....?

ಕುಣಿಗಲ್ : ತಾಲೂಕಿನ  ರಾಜಕೀಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟವನ್ನು ಹಾರಿಸಲು ಡಾ.ಅಶ್ವತ್ ನಾರಾಯಣ್ ಮುಂದಾಗಿದ್ದಾರೆ.

 ತಾಲೂಕಿನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಮೂರು ಬಾರಿ ಸೋತ ಹಿನ್ನೆಲೆ ಈ ಬಾರಿ ಪಕ್ಷವನ್ನು ಕುಣಿಗಲ್ ತಾಲೂಕಿನಲ್ಲಿ ಅಧಿಕಾರಕ್ಕೆ ತರಲು ಹಾಗೂ ಹಾಲಿ ಕುಣಿಗಲ್ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿಕೆ ಸಹೋದರರ ಸಂಬಂಧಿ ಡಾ.ರಂಗನಾಥ್ ಶಾಸಕರಾಗಿದ್ದರೆ ಇವರನ್ನು ಈ ಬಾರಿ ಸೋಲಿಸಲೇಬೇಕು ಎಂಬ ಶತಾಯಗತಾಯ ಸೇಡಿನ ರಾಜಕೀಯಕ್ಕೆ ಡಾ.ಅಶ್ವಥ್ ನಾರಾಯಣ್ ' ಕೈ ' ನಾಯಕ ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಗಾಳ ಹಾಕಿ ಬಹುದೊಡ್ಡ ರಣತಂತ್ರ ಹೇಳದಿದ್ದರೆ.
ಆಪ್ತ ವಲಯಗಳ ಮೂಲಕ ಡಾ.ಅಶ್ವಥನಾರಾಯಣ ಬೀಸಿರುವ ಬಲೆಗೆ ಮುದ್ದಹನುಮೇಗೌಡರು ಬಿದ್ದಂತೆ ಕಾಣುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕುಣಿಗಲ್ ತಾಲೂಕಿನಲ್ಲಿ ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಸಂದರ್ಭದಲ್ಲಿ ಬಹುತೇಕ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗುವ ವಿಶ್ವಾಸದೊಂದಿಗೆ ಮುದ್ದಾಹನುಮೆಗೌಡರು ಈಗಾಗಲೇ ಕ್ಷೇತ್ರದಲ್ಲಿ ಪ್ರತಿ ಹಳ್ಳಿಹಳ್ಳಿಗೂ ಸುತ್ತುವ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ ಸದ್ಯಕ್ಕೆ ನಾನು ಈಗ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಪಕ್ಷದಿಂದ ಟಿಕೆಟ್ ಕೇಳುತ್ತೇನೆ ಎಂದು ಎಸ್.ಪಿ.ಎಮ್ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಲಿ ಶಾಸಕ ಡಾ.ರಂಗನಾಥ್ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಿದ್ದು ಇದರ ಬಗ್ಗೆ ಕಾರ್ಯಕರ್ತರಿಗೆ ಗೊಂದಲ ಬೇಡ ಎಂಬ ಸಂದೇಶವನ್ನು ಕಾಂಗ್ರೆಸ್ ಪಕ್ಷ ಹಾಗೂ ಡಿಕೆ ಸಹೋದರರು ಕಾರ್ಯಕರ್ತರಿಗೆ ರವಾನಿಸಿದ್ದಾರೆ.


Comments

Popular posts from this blog

ಕುಣಿಗಲ್ ತಾಲೂಕಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ.

ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಣಿಗಲ್ ತಾಲೂಕಿನಲ್ಲಿ "ಕೈ" ಪ್ರತಿಭಟನೆ