ಕುಣಿಗಲ್ ತಾಲೂಕಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ.
ಕುಣಿಗಲ್: ಕುಖ್ಯಾತ ಸರಗಳ್ಳನನ್ನು ತುಮಕೂರಿನ ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಮದ್ದೂರಿನ ಇಮ್ರಾನ್ ಖಾನ್ (24) ಬಂಧಿತ ಆರೋಪಿ. ಈತ ಮಂಡ್ಯ, ತುಮಕೂರು ಸೇರಿದಂತೆ ಹಲವು ಕಡೆ ತನ್ನದೇ ಒಂದು ತಂಡ ಕಟ್ಟಿಕೊಂಡು ಸರಗಳ್ಳತನ ಮಾಡ್ತಿದ್ದ. ರಸ್ತೆಯಲ್ಲಿ ಓಡಾಡುವ ಒಂಟಿ ಮಹಿಳೆಯರನ್ನೇ ಗುರಿಯಾಗಿರಿಸಿ ಕೃತ್ಯವೆಸಗುತ್ತಿದ್ದ. ಜೂನ್ 14 ರಂದು ಬೈಕ್ ನಲ್ಲಿ ಬಂದು ವಸಂತ ಎಂಬ ಮಹಿಳೆಯನ್ನು ತಳ್ಳಿ ಸರ ಎಗರಿಸಿದ್ದ. ತಲೆಗೆ ಪೆಟ್ಟು ಬಿದ್ದ ಕಾರಣ ವಂಸತ ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಣಿಗಲ್ ಪೊಲೀಸರು ಮೈಸೂರು ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಮ್ರಾನ್ ಖಾನ್‌ನನ್ನು ದಸ್ತಗಿರಿ ಮಾಡಿದ್ದಾರೆ. ಈ ಕುಖ್ಯಾತ ಸರಗಳ್ಳನ ಬಂಧನದಿಂದ 8 ಪ್ರಕರಣಗಳು ಬೆಳಕಿಗೆ ಬಂದಿವೆ.
Comments
Post a Comment