ಕುಣಿಗಲ್ ಬಂದ್ ಯಶಸ್ವಿ...!

ಕುಣಿಗಲ್ :  ಸುಧಾರಣಾ ಕಾಯ್ದೆ , ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಹಲವಾರು ಸಂಘಟನೆಗಳು ನಡೆಸುತ್ತಿರು ಬಂದ್ ಕುಣಿಗಲ್ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

 ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣೆ, ಎಪಿಎಂಸಿ ಕಾಯ್ದೆ ,  ಶಿಕ್ಷಣ ಸೇರಿದಂತೆ ಹಲವಾರು ಕಾಯ್ದೆಗಳ ವಿರುದ್ಧ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ತಾಲೂಕಿನ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದವು.

 ಕುಣಿಗಲ್ ತಾಲೂಕಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದ ಸಂದರ್ಭ

ಅಂಗಡಿಗಳು , ಹೋಟೆಲ್ ಗಳು ಮುಚ್ಚಿದ್ದವು ಬಸ್ಸುಗಳ ಸಂಚಾರ ವಿರಳವಾಗಿತ್ತು.    ಪ್ರತಿಭಟನೆಯಲ್ಲಿ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ತಾಲೂಕು ರೈತ ಸಂಘದ ಅಕ್ಷರದ ಅನಿಲ್ ಕುಮಾರ್ , ಲಕ್ಷ್ಮಣಗೌಡ ದಲಿತ ಸಂಘರ್ಷ ಸಮಿತಿಯ ಶಿವಶಂಕರ್ ಚಿಕ್ಕಣ್ಣ , ಅಬ್ದುಲ್ ಮುನಾಫ್ ಡಾಕ್ಟರ್ ರಾಜಕುಮಾರ್ ಸಂಘದ ಅಧ್ಯಕ್ಷ ರಂಗಸ್ವಾಮಿ , ಕರವೇ ಅಧ್ಯಕ್ಷ ಮಂಜುನಾಥ್ , ಕನ್ನಡ ಸೇನೆಯ ಶ್ರೀನಿವಾಸ್ , ಪ್ರಗತಿಪರ ಚಿಂತಕ ಜಿ.ಕೆ ನಾಗಣ್ಣ ಸೇರಿದಂತೆ ಹಲವು ಮಂದಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

Comments

Popular posts from this blog

ಕುಣಿಗಲ್ ತಾಲೂಕಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ.

ಕುಣಿಗಲ್ ತಾಲೂಕಿನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಲು ಡಾ.ಅಶ್ವತ್ ನಾರಾಯಣ್ ರಣತಂತ್ರ ಕೈ ನಾಯಕ ಮುದ್ದಹನುಮೇಗೌಡರಿಗೆ ಬಹುತೇಕ ಬಿಜೆಪಿ ಪಕ್ಷದಿಂದ ಟಿಕೆಟ್ ಖಚಿತ ....?

ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಣಿಗಲ್ ತಾಲೂಕಿನಲ್ಲಿ "ಕೈ" ಪ್ರತಿಭಟನೆ