ಟ್ರಾಕ್ಟರ್ ಜಪ್ತಿ ಮಾಡಿದರೆ ಅದನ್ನು ನಾವೇ ಬಿಡಿಸಿಕೊಡಲು ಹೋಗುತ್ತೇವೆ - ಡಿಕೆಶಿ
ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಗಣರಾಜ್ಯೋತ್ಸವ ದಿನವಾದ ಮಂಗಳವಾರ ರೈತರು ದೆಹಲಿಯಲ್ಲಿ ಹಮ್ಮಿಕೊಂಡಿರುವ ರೈತ ಪೆರೇಡ್ ಬೆಂಬಲಿಸಿ ರಾಜಧಾನಿ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್, ಟ್ರಕ್‌ಗಳೊಂದಿಗೆ ರೈತರ ಬೃಹತ್ ಪರೇಡ್ ಹಮ್ಮಿಕೊಳ್ಳಲಾಗಿದೆ. ರೈತರ ಟ್ರಾಕ್ಟರ್ ಜಪ್ತಿ ಮಾಡಿದರೆ ಅದನ್ನು ನಾವೇ ಬಿಡಿಸಿಕೊಡಲು ಹೋಗುತ್ತೇವೆ. ಎಲ್ಲರಿಗೂ ನೋವು ಹೇಳಿಕೊಳ್ಳುವ ಹಕ್ಕಿದೆ. ರೈತರ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. ನಮ್ಮ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯನ್ನು ತಡೆದಿದ್ದರೂ. ನಮ್ಮದು ಪಕ್ಷದ ಪ್ರತಿಭಟನೆ ಆಗಿತ್ತು. ರೈತರ ಪ್ರತಿಭಟನೆ ಪರವಾಗಿ ಸರ್ಕಾರವೇ ನಿಂತುಕೊಳ್ಳಬೇಕು ಪೊಲೀಸರೇ ನೀವು ಸರ್ಕಾರದ ಕೈಗೊಂಬೆಯಾಬೇಡಿ. ನೀವು ಎಲ್ಲರಿಗು ಒಂದೇ ನ್ಯಾಯ ಕೊಡಿ. ಸುಪ್ರೀಂಕೋರ್ಟ್ ಸಹ ಪ್ರತಿಭಟನೆ ಮಾಡಬೇಡಿ ಎಂದು ಹೇಳಿಲ್ಲ. ಮಂಗಳವಾರ ರಜೆ ಇದೆ, ಯಾವ ಸಂಚಾರ ಸಮಸ್ಯೆಯೂ ಆಗಲ್ಲ ಅನ್ನದಾತ ಅನ್ನ ಕೊಟ್ಟರೇನೆ ನಾವು ಇರೋದು. ಜಿಲ್ಲೆಗಳಲ್ಲಿ ರೈತರನ್ನ ತಡೆಯುತ್ತಿದ್ದಾರೆ. ಡ್ರೈವರ್‌ಗಳಿಗೆ ಹೆದರಿಸುತ್ತಿದ್ದಾರೆ. ಕಾಂಗ್ರೆಸ್ ರೈತರ ಬೆಂಬಲವಾಗಿ ನಿಂತುಕೊಳ್ಳುತ್ತದೆ" ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿಕೆ.ಶಿವಕುಮಾರ್ ರೈತರ ಪ್ರತಿಭಟನೆಗೆ ಬೆಂಬಲ ಘೋಷಣೆ ಮಾಡಿದರು.