ದಾವಣಗೆರೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಕುಣಿಗಲ್ ಮೂಲದ ಕಾರ್ಮಿಕ ಸಾವು ಪಾರ್ಥಿವ ಶರೀರ ತರಲು ಪ್ರಯಾಣ ಬೆಳೆಸಿದ ಕುಣಿಗಲ್ ಶಾಸಕ..!
ದಾವಣಗೆರೆ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಡಿಸ್ಟಿಲರಿ ಕಾರ್ಖಾನೆಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಕಾರ್ಖಾನೆಯಲ್ಲಿದ್ದ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಒಬ್ಬರು ಮೃತರಾಗಿದ್ದಾರೆ. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಲಕ್ಷ್ಮಿಪುರ ಗ್ರಾಮದ ರಘು(38) ಮೃತದುರ್ದೈವಿ.
ಇನ್ನು ಮತಪಟ್ಟ ಕುಣಿಗಲ್ ತಾಲೂಕಿನ ನಿವಾಸಿಯಾದ ರಘು ರವರ ಸಾವಿನ ಸುದ್ದಿಯನ್ನು ತಿಳಿದ ತಾಲೂಕಿನ ಶಾಸಕರಾದ ರಂಗನಾಥ್ ರವರು ತಮ್ಮೆಲ್ಲ ಕಾರ್ಯಗಳನ್ನು ರದ್ದುಗೊಳಿಸಿ ಪಾರ್ಥಿವ ಶರೀರವನ್ನು ತಾಲೂಕಿಗೆ ತರಲು ಸ್ವತಹ ಶಾಸಕರು ದಾವಣಗೆರೆಗೆ ಪ್ರಯಾಣ ಬೆಳೆಸಿದ್ದಾರೆ.
ಡಿಸ್ಟಿಲರಿ ಕರ್ಖಾನೆಯಲ್ಲಿ ಬೆಳ್ಳಂಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು.
ತಕ್ಷಣ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಡಿಸ್ಟಿಲರಿ ಫ್ಯಾಕ್ಟರಿ ಆದ ಕಾರಣ ಬೆಂಕಿ ಹತೋಟಿಗೆ ಬರುತ್ತಿಲ್ಲ. ಬೆಂಕಿಯ ಶಾಖ ಹೆಚ್ಚಾಗಿದ್ದು ಸ್ಥಳೀಯರು ಕಾರ್ಖಾನೆಯಿಂದ 500 ಮೀಟರ್ ದೂರ ಸರಿದಿದ್ದಾರೆ.
ಅವಘಡದಲ್ಲಿ ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಗೆ ಸಾಗಿಸುವ ವೇಳೆ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನು ಹರಿಹರ ತಾಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
Comments
Post a Comment