ರೈತರ ಟ್ಯಾಕ್ಟರ್ ತಡೆಹಿಡಿದ ಕುಣಿಗಲ್ ಪೊಲೀಸರು...! ಬೀದಿಗಿಳಿದ ರೈತರು...!
ಕುಣಿಗಲ್ : ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಗಣರಾಜ್ಯೋತ್ಸವ ದಿನವಾದ ಮಂಗಳವಾರ ರೈತರು ದೆಹಲಿಯಲ್ಲಿ ಹಮ್ಮಿಕೊಂಡಿರುವ ರೈತ ಪೆರೇಡ್ ಬೆಂಬಲಿಸಿ ರಾಜಧಾನಿ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್, ಟ್ರಕ್‌ಗಳೊಂದಿಗೆ ರೈತರ ಬೃಹತ್ ಪರೇಡ್ ಹಮ್ಮಿಕೊಳ್ಳಲಾಗಿದೆ.
ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ನಡೆಯುವ ರೈತರ ಪರೇಡ್ ನಲ್ಲಿ ಭಾಗವಹಿಸಲು ಕುಣಿಗಲ್ ತಾಲೂಕಿನಿಂದ ರೈತರು ತಮ್ಮ ವಾಹನಗಳೊಂದಿಗೆ ಹೊರಟಿದ್ದರು ಆದರೆ ರಾಷ್ಟ್ರೀಯ ಹೆದ್ದಾರಿ ಜಾನ್ಸನ್ ಫ್ಯಾಕ್ಟರಿಯ ಬಳಿ ಪೊಲೀಸರು ರೈತರ ಟ್ಯಾಕ್ಟರ್ ಗಳನ್ನು ತಡೆಹಿಡಿದಿದ್ದಾರೆ.
ಸರ್ಕಾರ ಪೊಲೀಸರನ್ನು ಬಳಸಿಕೊಂಡು ಗಣರಾಜ್ಯೋತ್ಸವದ ರೈತರ ಪರೇಡ್ ವಿಫಲಗೊಳಿಸಲು ಹುನ್ನಾರ ನಡೆಸಿದೆ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ತಿಳಿಸಿದರು. ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ ಶಾಂತಿಯುತವಾಗಿ ನಡೆಯುವ ರೈತ ಪರೇಡ್'ಗೆ ಪೊಲೀಸರು ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸರು ಇದಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ರೈತರು ತಮ್ಮ ಟ್ಯಾಕ್ಟರ್ ಗಳನ್ನು ರಾಷ್ಟ್ರೀಯ ದಾರಿಯಲ್ಲಿ ನಿಲ್ಲಿಸಿ ಸರಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ದಿಕ್ಕಾರ ಕೂಗುತ್ತಾ ಪ್ರತಿಭಟನೆಗಿಳಿದರು ಇದರಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ವಾಹನ ಸವಾರರು ಪರದಾಡುವಂತಾಯಿತು.
Comments
Post a Comment