Posts

ಕುಣಿಗಲ್ ತಾಲೂಕಿನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಲು ಡಾ.ಅಶ್ವತ್ ನಾರಾಯಣ್ ರಣತಂತ್ರ ಕೈ ನಾಯಕ ಮುದ್ದಹನುಮೇಗೌಡರಿಗೆ ಬಹುತೇಕ ಬಿಜೆಪಿ ಪಕ್ಷದಿಂದ ಟಿಕೆಟ್ ಖಚಿತ ....?

Image
ಕುಣಿಗಲ್ : ತಾಲೂಕಿನ  ರಾಜಕೀಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟವನ್ನು ಹಾರಿಸಲು ಡಾ.ಅಶ್ವತ್ ನಾರಾಯಣ್ ಮುಂದಾಗಿದ್ದಾರೆ.  ತಾಲೂಕಿನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಮೂರು ಬಾರಿ ಸೋತ ಹಿನ್ನೆಲೆ ಈ ಬಾರಿ ಪಕ್ಷವನ್ನು ಕುಣಿಗಲ್ ತಾಲೂಕಿನಲ್ಲಿ ಅಧಿಕಾರಕ್ಕೆ ತರಲು ಹಾಗೂ ಹಾಲಿ ಕುಣಿಗಲ್ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿಕೆ ಸಹೋದರರ ಸಂಬಂಧಿ ಡಾ.ರಂಗನಾಥ್ ಶಾಸಕರಾಗಿದ್ದರೆ ಇವರನ್ನು ಈ ಬಾರಿ ಸೋಲಿಸಲೇಬೇಕು ಎಂಬ ಶತಾಯಗತಾಯ ಸೇಡಿನ ರಾಜಕೀಯಕ್ಕೆ ಡಾ.ಅಶ್ವಥ್ ನಾರಾಯಣ್ ' ಕೈ ' ನಾಯಕ ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಗಾಳ ಹಾಕಿ ಬಹುದೊಡ್ಡ ರಣತಂತ್ರ ಹೇಳದಿದ್ದರೆ. ಆಪ್ತ ವಲಯಗಳ ಮೂಲಕ ಡಾ.ಅಶ್ವಥನಾರಾಯಣ ಬೀಸಿರುವ ಬಲೆಗೆ ಮುದ್ದಹನುಮೇಗೌಡರು ಬಿದ್ದಂತೆ ಕಾಣುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕುಣಿಗಲ್ ತಾಲೂಕಿನಲ್ಲಿ ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಸಂದರ್ಭದಲ್ಲಿ ಬಹುತೇಕ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗುವ ವಿಶ್ವಾಸದೊಂದಿಗೆ ಮುದ್ದಾಹನುಮೆಗೌಡರು ಈಗಾಗಲೇ ಕ್ಷೇತ್ರದಲ್ಲಿ ಪ್ರತಿ ಹಳ್ಳಿಹಳ್ಳಿಗೂ ಸುತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ ನಾನು ಈಗ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಪಕ್ಷದಿಂದ ಟಿಕೆಟ್ ಕೇಳುತ್ತೇನೆ ಎಂದು ಎಸ್.ಪಿ.ಎಮ್ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದಾರೆ. ಕ್ಷೇತ್...

ಮೈದುಂಬಿ ಹರಿಯುತ್ತಿದೆ ಐತಿಹಾಸಿಕ ಮಾರ್ಕೋನಹಳ್ಳಿ ಜಲಾಶಯ..!

Image
ಕುಣಿಗಲ್ : ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ಐತಿಹಾಸಿಕ ಮಾರ್ಕೋನಹಳ್ಳಿ ಜಲಾಶಯ ಇಂದು ಮುಂಜಾನೆ ಕೋಡಿಯಾಗಿದೆ. ಜಲಾಶಯ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಬಾರಿ ಮಳೆ ಹಾಗೂ ಹೇಮಾವತಿ ಒಳಹರಿವಿನ ನೀರು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಿಂದ ಸೇರಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಒಳಹರಿವಿನ ಹೆಚ್ಚಳವಾಗುತ್ತಿದ್ದು ಜಲಾಶಯದ ಎರಡು ಆಟೋಮೆಟಿಕ್ ಸೈಪಾನ್ ಗಳಲ್ಲಿ ನೀರು ಹರಿಯುತ್ತಿದ್ದು ಪ್ರವಾಸಿಗರು ಈ ದೃಶ್ಯವನ್ನು ಸವಿಯಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಅಲ್ಲದೆ ಜಲಾಶಯದಿಂದ ಈಗಾಗಲೇ ಅಚ್ಚುಕಟ್ಟುದಾರರಲ್ಲಿ ರಾಗಿ ಬೆಳೆ ನೀರು ಹರಿಸಲಾಗಿದೆ ಆದರೆ ಮಳೆ ಹಾಗೂ ಜಲಾಶಯದ ನೀರು  ಅಚ್ಚುಕಟ್ಟು ಪ್ರದೇಶಕ್ಕೆ ಹರಿಯುತ್ತಿರುವುದರಿಂದ ಈಗ ತಾನೆ ನಾಟಿ ಮಾಡಿರುವ ರಾಗಿ ಬೆಳೆ ಸಂಪೂರ್ಣವಾಗಿ ಕೊಳೆತು ಹೋಗುವುದು ಎಂದು ರೈತರಲ್ಲಿ ಆತಂಕ ಮೂಡಿಸಿದೆ.

ಅಕ್ಟೋಬರ್ 1 ರಂದು ಬೃಹತ್ ಆರೋಗ್ಯ ಶಿಬಿರ...!

Image
ಕುಣಿಗಲ್: ಪಂಡಿತ್ ದೀನದಯಾಳ್ ಉಪಾಧ್ಯಾಯ ರವರ ಜನ್ಮ ದಿನದ ಸ್ಮರಣಾರ್ಥ ಅಂಗವಾಗಿ ತಾಲೂಕಿನ ಪಟ್ಟಣದಲ್ಲಿ ಹೆಚ್.ಡಿ  ರಾಜೇಶ್ ಗೌಡ ಸೇವಾ ಪ್ರತಿಷ್ಠಾನ ರಿ. ಇವರ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಹಕಾರದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಇದನ್ನು ಕುಣಿಗಲ್ ತಾಲೂಕಿನ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಮಾಜ ಸೇವಕರು ಹಾಗೂ ಬಿಜೆಪಿ ಮುಖಂಡರಾದ ಹೆಚ್.ಡಿ ರಾಜೇಶ್ ಗೌಡರವರು ತಿಳಿಸಿದರು. ದಿನಾಂಕ 01-10-2021 ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಟ್ಟಳ್ಳಿ ಮಠ ಕಾಲೇಜು ಆವರಣ ಸಂತೆಪೇಟೆ ಹುತ್ರಿದುರ್ಗ ಹೋಬಳಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಇದರ ಅಂಗವಾಗಿ ಇಂದು ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ರಾಜೇಶ್ ಗೌಡರವರು  ಅತ್ಯುತ್ತಮ ಸುಸಜ್ಜಿತವಾದ ಆಸ್ಪತ್ರೆ ಮಾದರಿಯ ರೀತಿಯಲ್ಲಿ ಟೆಂಟುಗಳ ನಿರ್ಮಾಣವಾಗುತ್ತಿದ್ದು ಅದನ್ನು ಪರಿಶೀಲಿಸಿ ಮಾತನಾಡಿದರು.

ಬಂದ್ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಬೆಂಕಿಯಿಟ್ಟ ಕಿಚ್ಚ ಹೊರಹಾಕಿದ ಕುಣಿಗಲ್ ರೈತರು..!

Image
ಕುಣಿಗಲ್ : ಕಳೆದ  ವರ್ಷ ಸೆಪ್ಟೆಂಬರ್ ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (SKM) ಭಾರತದಾದ್ಯಂತ ಬಂದ್​​ಗೆ ಕರೆ ನೀಡಿತ್ತು. ಬಂದ್ ಕರೆಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ‘ಭಾರತ್ ಬಂದ್’ ತಾಲೂಕಿನಲ್ಲಿ ಸಂಪೂರ್ಣ ಯಶಸ್ವಿಯಾಯಿತು.  ತಾಲೂಕಿನಲ್ಲಿ ಕೆಲ ತೆರೆದಿದ್ದ ಅಂಗಡಿ-ಮುಂಗಟ್ಟುಗಳನ್ನು ನೂರಾರು ರೈತರ ಸರಿ ಸಂಪೂರ್ಣ ಮುಚ್ಚಿಸುವಲ್ಲಿ ಯಶಸ್ವಿಯಾದರು ರೈತರ ಕರೆಗೆ ಓಗೊಟ್ಟು ಕೆಲ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ತಾಲೂಕು ಅಧ್ಯಕ್ಷ ಅನಿಲ್ ರವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಪ್ರಧಾನಿ ನರೇಂದ್ರ ಮೋದಿಯವರ ಅಣಕು ಶವಯಾತ್ರೆಯನ್ನು ನಡೆಸಿ ನೂರಾರು ರೈತರ ಸಮ್ಮುಖದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಧಿಕಾರಗಳನ್ನು ಕೂಗುತ ಹುಚ್ಚು ಮಾಸ್ತಿ ಗೌಡರ ವೃತ್ತದ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಹಣಕು ಶವಕ್ಕೆ ಬೆಂಕಿ ಹಚ್ಚುವ ಮೂಲಕ ತಮ್ಮ ಕಿಚ್ಚನ್ನು ಹೊರಹಾಕಿದರು.

ಲಂಚ ಪಡೆದ ಕುಣಿಗಲ್ ಸಾರ್ವಜನಿಕಸರ್ಕಾರಿ ವೈದ್ಯೆ, ನರ್ಸ್​ಗೆ ಜೈಲು ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ; ಹಸು ಮಾರಿ ಹಣ ನೀಡಿದ ಮಹಿಳೆಗೆ ನ್ಯಾಯ

Image
ಕುಣಿಗಲ್: ಗರ್ಭಕೋಶ ಶಸ್ತ್ರಚಿಕಿತ್ಸೆಗೆಂದು ಬಂದಿದ್ದ ಮಹಿಳೆಯಿಂದ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, 6 ಸಾವಿರ ರೂಪಾಯಿ ಪಡೆದು ಶಸ್ತ್ರಚಿಕಿತ್ಸೆ ಮಾಡಿ ನಂತರ 4 ಸಾವಿರ ರೂಪಾಯಿ ನೀಡದಿದ್ದಕ್ಕೆ ಡಿಸ್ಚಾರ್ಚ್​ ಮಾಡದೇ ಸತಾಯಿಸಿ ಉಳಿದ ಹಣವನ್ನೂ ತರಿಸಿಕೊಂಡಿದ್ದ ಸರ್ಕಾರಿ ವೈದ್ಯೆ ಹಾಗೂ ನರ್ಸ್​ ಇಬ್ಬರಿಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತುಮಕೂರಿನ 7ನೇ ಅಧಿಕ ಜಿಲ್ಲಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಜಯಮ್ಮ ಎಂಬುವರಿಗೆ ಗರ್ಭಕೋಶ ಆಪರೇಷನ್‌ ಮಾಡಲು ವೈದ್ಯೆ ಕೆ.ಮಮತಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ನರ್ಸ್ ಗಂಗಮ್ಮ ಲಂಚ ನೀಡುವಂತೆ ಒತ್ತಡ ಹಾಕಿದ್ದರು. ಕೊನೆಗೆ ಅವರಿಬ್ಬರ ಲಂಚಬಾಕತನಕ್ಕೆ ಮಣಿದು ಜಯಮ್ಮ ಮನೆಯವರು ಹಸು ಮಾರಿ ಹಣ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ 2014ರ ಸೆಪ್ಟೆಂಬರ್ 8ರಂದು ಪ್ರಕರಣ ದಾಖಲಾಗಿತ್ತು. ಸತತ 7 ವರ್ಷಗಳ ವಿಚಾರಣೆ ಬಳಿಕ ಕೋರ್ಟ್‌ನಿಂದ ತೀರ್ಪು ಲಭಿಸಿದ್ದು, ವೈದ್ಯೆ ಕೆ.ಮಮತಾಗೆ 7 ವರ್ಷ ಜೈಲು, ₹20 ಸಾವಿರ ದಂಡ ಹಾಗೂ ನರ್ಸ್ ಗಂಗಮ್ಮಗೆ 3 ವರ್ಷ ಜೈಲು, ₹10 ಸಾವಿರ ದಂಡ ವಿಧಿಸಿ ಆದೇಶ ನೀಡಲಾಗಿದೆ.  ಭ್ರಷ್ಟರ ಕಾರ್ಯಾಚರಣೆ ನಡೆಸಿದ ಅಂದಿನ ಲೋಕಾಯುಕ್ತ ಇನ್ಸ್ ಪೆಕ್ಟರ್ ಗೌತಮ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಾಕಿ 4 ಸಾವಿರ ರೂಪಾಯಿ ನೀಡದೇ ಜಯಮ್ಮರನ್ನು ಡಿಸ್ಚಾರ್ಜ್​ ಮಾಡುವುದಿಲ್ಲವೆಂದು ಸತಾಯಿಸಿದ್ದ ಡಾ.ಕೆ.ಮಮತಾ ಹಾಗೂ ನರ್ಸ್​ ಗಂಗಮ್ಮ ಇಬ್ಬರ ಕಾಟ ತಾಳಲಾರದೇ...

ಹೇಮಾವತಿ ನೀರಿಗಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ ತಾಲೂಕು ಜೆಡಿಎಸ್ ನಾಯಕ ಜಗದೀಶ್ ನಾಗರಾಜಯ್ಯ

Image
ಕುಣಿಗಲ್ : ತಾಲೂಕಿನ ಹೇಮಾವತಿ ನೀರಿನ ವಿಚಾರವಾಗಿ ಇಂದು ದೊಡ್ಡಕೆರೆ ಅಚ್ಚುಕಟ್ಟುದಾರರು ಸಭೆಯನ್ನು ಕರೆದಿದ್ದು ಜೆಡಿಎಸ್ ನಾಯಕ ಜಗದೀಶ್ ನಾಗರಾಜಯ್ಯ ಮಾತನಾಡಿ ತಾಲೂಕಿಗೆ ಹೇಮಾವತಿ ನೀರಿನ ವಿಚಾರದಲ್ಲಿ ರಾಜಕೀಯವನ್ನು ಬದಿಗಿಟ್ಟು ನಾವೆಲ್ಲರೂ ಕೂಡ ಒಗ್ಗಟ್ಟಿನಿಂದ ನೀರನ್ನು ತರಬೇಕಾಗಿದೆ. ಯುವಕರು ಹೋರಾಟದ ಚಿಂತನೆ ಮರೆತಿದ್ದಾರೆ ಪಕ್ಕದ ತಾಲೂಕಿನಲ್ಲಿ ನೀರಿನ ವಿಚಾರವಾಗಿ ನಡೆಸುವ ಒಗ್ಗಟ್ಟಿನ ಮಂತ್ರ  ನಾವು ನೋಡಿ ಕಲಿಯಬೇಕು ತಾಲೂಕಿಗೆ ಬರುತ್ತಿರುವ ಹೇಮಾವತಿ ನೀರಿನ ನಾಲೆ ಹಾಗೆದು ತುರುವೇಕೆರೆ ತಾಲೂಕಿಗೆ ನೀರು ತೆಗೆದುಕೊಂಡು ಹೋಗುತ್ತಿರುವವರ ವಿರುದ್ಧ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ದೂರು ಕೊಟ್ಟರು ಅಧಿಕಾರಿಗಳು  ಅದನ್ನು ಸಮರ್ಥಿಸಿಕೊಳ್ಳುವ ಹಂತಕ್ಕೆ ಬಂದಿದ್ದಾರೆ ಇದು ತಾಲೂಕಿನ ದುರಾದೃಷ್ಟ ಎಂದು ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ಜೆಡಿಎಸ್ ಪಕ್ಷದ ನಾಯಕರು ಹಾಗೂ ದೊಡ್ಡಕೆರೆ ಅಚ್ಚುಕಟ್ಟುದಾರರು ಉಪಸ್ಥಿತರಿದ್ದರು.

ಅಪಘಾತಕ್ಕೀಡಾದ ಗಾಯಾಳುವಿಗೆ ನೆರವಾಗಿ ಮಾನವೀಯತೆ ಮೆರೆದ ಡಿ.ಕೆ. ಶಿವಕುಮಾರ್...!

Image
ಕುಣಿಗಲ್ :  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹುಲಿಯೂರುದುರ್ಗದಲ್ಲಿ ಲಸಿಕಾ ಕಾರ್ಯಕ್ರಮ ಉದ್ಘಾಟಿಸಲು ತೆರಳುತ್ತಿರುವಾಗ, ಕುಣಿಗಲ್  ಚಿಕ್ಕಕೆರೆ ಬಳಿ ಬೈಕ್ ನಿಂದ ಕೆಳಗೆ ಬಿದ್ದು ನರಳಾಡುತ್ತಿದ್ದ ಗಾಯಾಳುವನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದರು. ಈ ವೇಳೆ ಡಿ.ಕೆ. ಶಿವಕುಮಾರ್ ಅವರ ಜತೆಗಿದ್ದ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸುತ್ತಮುತ್ತಲಿನವರು ಪರದಾಡುತ್ತಿದ್ದಾಗ ಶಿವಕುಮಾರ್ ಅವರು ತಮ್ಮ ಕಾರಿನಲ್ಲಿಯೇ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿ, ರಂಗನಾಥ್ ಅವರ ಕಾರಿನಲ್ಲಿ ಹುಲಿಯೂರು ದುರ್ಗದ ಕಡೆ ಪ್ರಯಾಣ ಬೆಳೆಸಿದರು.