ಮೈದುಂಬಿ ಹರಿಯುತ್ತಿದೆ ಐತಿಹಾಸಿಕ ಮಾರ್ಕೋನಹಳ್ಳಿ ಜಲಾಶಯ..!

ಕುಣಿಗಲ್ : ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ಐತಿಹಾಸಿಕ ಮಾರ್ಕೋನಹಳ್ಳಿ ಜಲಾಶಯ ಇಂದು ಮುಂಜಾನೆ ಕೋಡಿಯಾಗಿದೆ. ಜಲಾಶಯ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಬಾರಿ ಮಳೆ ಹಾಗೂ ಹೇಮಾವತಿ ಒಳಹರಿವಿನ ನೀರು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಿಂದ ಸೇರಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಒಳಹರಿವಿನ ಹೆಚ್ಚಳವಾಗುತ್ತಿದ್ದು ಜಲಾಶಯದ ಎರಡು ಆಟೋಮೆಟಿಕ್ ಸೈಪಾನ್ ಗಳಲ್ಲಿ ನೀರು ಹರಿಯುತ್ತಿದ್ದು ಪ್ರವಾಸಿಗರು ಈ ದೃಶ್ಯವನ್ನು ಸವಿಯಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಅಲ್ಲದೆ ಜಲಾಶಯದಿಂದ ಈಗಾಗಲೇ ಅಚ್ಚುಕಟ್ಟುದಾರರಲ್ಲಿ ರಾಗಿ ಬೆಳೆ ನೀರು ಹರಿಸಲಾಗಿದೆ ಆದರೆ ಮಳೆ ಹಾಗೂ ಜಲಾಶಯದ ನೀರು  ಅಚ್ಚುಕಟ್ಟು ಪ್ರದೇಶಕ್ಕೆ ಹರಿಯುತ್ತಿರುವುದರಿಂದ ಈಗ ತಾನೆ ನಾಟಿ ಮಾಡಿರುವ ರಾಗಿ ಬೆಳೆ ಸಂಪೂರ್ಣವಾಗಿ ಕೊಳೆತು ಹೋಗುವುದು ಎಂದು ರೈತರಲ್ಲಿ ಆತಂಕ ಮೂಡಿಸಿದೆ.

Comments

Popular posts from this blog

ಕುಣಿಗಲ್ ತಾಲೂಕಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ.

ಕುಣಿಗಲ್ ತಾಲೂಕಿನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಲು ಡಾ.ಅಶ್ವತ್ ನಾರಾಯಣ್ ರಣತಂತ್ರ ಕೈ ನಾಯಕ ಮುದ್ದಹನುಮೇಗೌಡರಿಗೆ ಬಹುತೇಕ ಬಿಜೆಪಿ ಪಕ್ಷದಿಂದ ಟಿಕೆಟ್ ಖಚಿತ ....?

ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಣಿಗಲ್ ತಾಲೂಕಿನಲ್ಲಿ "ಕೈ" ಪ್ರತಿಭಟನೆ