ಲಂಚ ಪಡೆದ ಕುಣಿಗಲ್ ಸಾರ್ವಜನಿಕಸರ್ಕಾರಿ ವೈದ್ಯೆ, ನರ್ಸ್​ಗೆ ಜೈಲು ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ; ಹಸು ಮಾರಿ ಹಣ ನೀಡಿದ ಮಹಿಳೆಗೆ ನ್ಯಾಯ

ಕುಣಿಗಲ್: ಗರ್ಭಕೋಶ ಶಸ್ತ್ರಚಿಕಿತ್ಸೆಗೆಂದು ಬಂದಿದ್ದ ಮಹಿಳೆಯಿಂದ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, 6 ಸಾವಿರ ರೂಪಾಯಿ ಪಡೆದು ಶಸ್ತ್ರಚಿಕಿತ್ಸೆ ಮಾಡಿ ನಂತರ 4 ಸಾವಿರ ರೂಪಾಯಿ ನೀಡದಿದ್ದಕ್ಕೆ ಡಿಸ್ಚಾರ್ಚ್​ ಮಾಡದೇ ಸತಾಯಿಸಿ ಉಳಿದ ಹಣವನ್ನೂ ತರಿಸಿಕೊಂಡಿದ್ದ ಸರ್ಕಾರಿ ವೈದ್ಯೆ ಹಾಗೂ ನರ್ಸ್​ ಇಬ್ಬರಿಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತುಮಕೂರಿನ 7ನೇ ಅಧಿಕ ಜಿಲ್ಲಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಜಯಮ್ಮ ಎಂಬುವರಿಗೆ ಗರ್ಭಕೋಶ ಆಪರೇಷನ್‌ ಮಾಡಲು ವೈದ್ಯೆ ಕೆ.ಮಮತಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ನರ್ಸ್ ಗಂಗಮ್ಮ ಲಂಚ ನೀಡುವಂತೆ ಒತ್ತಡ ಹಾಕಿದ್ದರು.

ಕೊನೆಗೆ ಅವರಿಬ್ಬರ ಲಂಚಬಾಕತನಕ್ಕೆ ಮಣಿದು ಜಯಮ್ಮ ಮನೆಯವರು ಹಸು ಮಾರಿ ಹಣ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ 2014ರ ಸೆಪ್ಟೆಂಬರ್ 8ರಂದು ಪ್ರಕರಣ ದಾಖಲಾಗಿತ್ತು. ಸತತ 7 ವರ್ಷಗಳ ವಿಚಾರಣೆ ಬಳಿಕ ಕೋರ್ಟ್‌ನಿಂದ ತೀರ್ಪು ಲಭಿಸಿದ್ದು, ವೈದ್ಯೆ ಕೆ.ಮಮತಾಗೆ 7 ವರ್ಷ ಜೈಲು, ₹20 ಸಾವಿರ ದಂಡ ಹಾಗೂ ನರ್ಸ್ ಗಂಗಮ್ಮಗೆ 3 ವರ್ಷ ಜೈಲು, ₹10 ಸಾವಿರ ದಂಡ ವಿಧಿಸಿ ಆದೇಶ ನೀಡಲಾಗಿದೆ.

 ಭ್ರಷ್ಟರ ಕಾರ್ಯಾಚರಣೆ ನಡೆಸಿದ ಅಂದಿನ ಲೋಕಾಯುಕ್ತ ಇನ್ಸ್ ಪೆಕ್ಟರ್ ಗೌತಮ

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ
ಬಾಕಿ 4 ಸಾವಿರ ರೂಪಾಯಿ ನೀಡದೇ ಜಯಮ್ಮರನ್ನು ಡಿಸ್ಚಾರ್ಜ್​ ಮಾಡುವುದಿಲ್ಲವೆಂದು ಸತಾಯಿಸಿದ್ದ ಡಾ.ಕೆ.ಮಮತಾ ಹಾಗೂ ನರ್ಸ್​ ಗಂಗಮ್ಮ ಇಬ್ಬರ ಕಾಟ ತಾಳಲಾರದೇ ಜಯಮ್ಮನ ಮನೆಯವರು ಹಸು ಮಾರಿ ಹಣ ನೀಡಿದ್ದರು. ಆದರೆ, ಉಳಿದ 4 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆಗೆ ಅವರಿಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. 2014ರ ಸೆಪ್ಟೆಂಬರ್ 8ರಂದು ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಇದೀಗ ಸತತ 7 ವರ್ಷಗಳ ವಿಚಾರಣೆ ಬಳಿಕ ತುಮಕೂರಿನ 7ನೇ ಅಧಿಕ ಜಿಲ್ಲಾ ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಿದ್ದಿದ್ದು, ಸದ್ಯ ರಾಮನಗರದಲ್ಲಿ ಕರ್ತವ್ಯದಲ್ಲಿದ್ದ ಡಾ. ಕೆ.ಮಮತಾಗೆ 7 ವರ್ಷ ಜೈಲು, ₹20 ಸಾವಿರ ದಂಡ ವಿಧಿಸಲಾಗಿದೆ ಹಾಗೂ ನರ್ಸ್ ಗಂಗಮ್ಮಗೆ 3 ವರ್ಷ ಜೈಲು, ₹10 ಸಾವಿರ ದಂಡ ವಿಧಿಸಲಾಗಿದೆ. 7ನೇ ಅಧಿಕ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರ ನಾಥ್ ರಿಂದ ತೀರ್ಪು ಪ್ರಕಟವಾಗಿದೆ.


Comments

Popular posts from this blog

ಕುಣಿಗಲ್ ತಾಲೂಕಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ.

ಕುಣಿಗಲ್ ತಾಲೂಕಿನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಲು ಡಾ.ಅಶ್ವತ್ ನಾರಾಯಣ್ ರಣತಂತ್ರ ಕೈ ನಾಯಕ ಮುದ್ದಹನುಮೇಗೌಡರಿಗೆ ಬಹುತೇಕ ಬಿಜೆಪಿ ಪಕ್ಷದಿಂದ ಟಿಕೆಟ್ ಖಚಿತ ....?

ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಣಿಗಲ್ ತಾಲೂಕಿನಲ್ಲಿ "ಕೈ" ಪ್ರತಿಭಟನೆ