ಹೇಮಾವತಿ ನೀರಿಗಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ ತಾಲೂಕು ಜೆಡಿಎಸ್ ನಾಯಕ ಜಗದೀಶ್ ನಾಗರಾಜಯ್ಯ
ಕುಣಿಗಲ್ : ತಾಲೂಕಿನ ಹೇಮಾವತಿ ನೀರಿನ ವಿಚಾರವಾಗಿ ಇಂದು ದೊಡ್ಡಕೆರೆ ಅಚ್ಚುಕಟ್ಟುದಾರರು ಸಭೆಯನ್ನು ಕರೆದಿದ್ದು ಜೆಡಿಎಸ್ ನಾಯಕ ಜಗದೀಶ್ ನಾಗರಾಜಯ್ಯ ಮಾತನಾಡಿ ತಾಲೂಕಿಗೆ ಹೇಮಾವತಿ ನೀರಿನ ವಿಚಾರದಲ್ಲಿ ರಾಜಕೀಯವನ್ನು ಬದಿಗಿಟ್ಟು ನಾವೆಲ್ಲರೂ ಕೂಡ ಒಗ್ಗಟ್ಟಿನಿಂದ ನೀರನ್ನು ತರಬೇಕಾಗಿದೆ.
ಯುವಕರು ಹೋರಾಟದ ಚಿಂತನೆ ಮರೆತಿದ್ದಾರೆ ಪಕ್ಕದ ತಾಲೂಕಿನಲ್ಲಿ ನೀರಿನ ವಿಚಾರವಾಗಿ ನಡೆಸುವ ಒಗ್ಗಟ್ಟಿನ ಮಂತ್ರ ನಾವು ನೋಡಿ ಕಲಿಯಬೇಕು ತಾಲೂಕಿಗೆ ಬರುತ್ತಿರುವ ಹೇಮಾವತಿ ನೀರಿನ ನಾಲೆ ಹಾಗೆದು ತುರುವೇಕೆರೆ ತಾಲೂಕಿಗೆ ನೀರು ತೆಗೆದುಕೊಂಡು ಹೋಗುತ್ತಿರುವವರ ವಿರುದ್ಧ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ದೂರು ಕೊಟ್ಟರು ಅಧಿಕಾರಿಗಳು ಅದನ್ನು ಸಮರ್ಥಿಸಿಕೊಳ್ಳುವ ಹಂತಕ್ಕೆ ಬಂದಿದ್ದಾರೆ ಇದು ತಾಲೂಕಿನ ದುರಾದೃಷ್ಟ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಜೆಡಿಎಸ್ ಪಕ್ಷದ ನಾಯಕರು ಹಾಗೂ ದೊಡ್ಡಕೆರೆ ಅಚ್ಚುಕಟ್ಟುದಾರರು ಉಪಸ್ಥಿತರಿದ್ದರು.
Comments
Post a Comment