ನೂತನ ಶಾಸಕ ಮುನಿರತ್ನಗೆ ಶಾಕ್ ಕೊಟ್ಟ ಹೈಕೋರ್ಟ್..!
ಆರ್ ನಗರ ಉಪಚುನಾವಣೆಯಲ್ಲಿ ಗೆದ್ದು ನೂತನ ಶಾಸಕರಾಗಿರುವ ಮುನಿರತ್ನಗೆ ಇಂದು ಹೈಕೋರ್ಟ್ ಶಾಕ್ ಕೊಟ್ಟಿದೆ ಹೌದು ವೋಟರ್ ಐಡಿ ಪತ್ತೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನ ನೇಮಿಸಿ ಪ್ರಕರಣದ ಪರಾಮರ್ಶೆ ನಡೆಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಮುನಿರತ್ನ ವಿರುದ್ಧ ಸಿಬಿಐ ತನಿಖೆ ಕೋರಿ ಆನಂದ್, ಸಂತೋಷ್ ಎಂಬುವವರು ಪಿಐಎಲ್ ಸಲ್ಲಿಸಿದ್ದರು. ತನಿಖೆ ನಡೆಸಲು ಸಿಬಿಐ ಅಸಹಾಯಕತೆ ಹಿನ್ನೆಲೆ ಹಿರಿಯ ಐಪಿಎಸ್ ಅಧಿಕಾರಿ ನೇಮಿಸಲು ಡಿಜಿ ಐಜಿಪಿಗೆ ಸಿಜೆ ಎ.ಎಸ್. ಓಕಾ ನೇತೃತ್ವದ ಪೀಠ ಸೂಚನೆ ನೀಡಿದೆ.
Comments
Post a Comment