ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಣಿಗಲ್ ತಾಲೂಕಿನಲ್ಲಿ "ಕೈ" ಪ್ರತಿಭಟನೆ
ಕುಣಿಗಲ್ : ಇಂಧನ ಬೆಲೆ ಹೆಚ್ಚಳ , ಕೃಷಿ ಕಾಯ್ದೆ ವಾಪಸ್ ಗೆ ಒತ್ತಾಯಿಸಿ ಕುಣಿಗಲ್ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಮಾತನಾಡಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರ ಏರಿಕೆಯಿಂದಾಗಿ ಸಾಮಾನ್ಯ ಜನರ ಜೀವನ ಮಾಡುವುದೇ ಕಷ್ಟವಾಗಿದೆ ಕೃಷಿಕರ ಬದುಕನ್ನು ಕಿತ್ತುಕೊಳ್ಳುವ ಕಾಯ್ದೆ ಜಾರಿಗೊಳಿಸಿದ್ದು ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರು ಬಡವರನ್ನು ಮರೆತು ವ್ಯಾಪಾರಿಗಳ ಪರವಾಗಿ ಕಾಯ್ದೆಗಳನ್ನು ಜಾರಿಗೊಳಿಸಿದೆ ಎಂದು ಆಕ್ರೋಶ ಹಾಕಿದರು
ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಮಾತನಾಡಿ
ರೈತರು ಮತ್ತು ಜನಸಾಮಾನ್ಯರ ಹಿತ ಮರೆತಿರುವ ಕೇಂದ್ರ ಸರ್ಕಾರ ಬಡ ಜನತೆಯ ಓಟು ಪಡೆದು ನಂತರ ಜನರಿಗೆ ಗ್ಯಾಸ್ ಬೆಲೆ , ತೈಲ ಆಹಾರ ಪದಾರ್ಥಗಳು ಹೆಚ್ಚಳ ಮಾಡುವ ಮೂಲಕ ಜನತೆಗೆ ಬಾರಿ ದೊಡ್ಡ ಉಡುಗೊರೆ ನೀಡಿದೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದುರು.
ಪ್ರತಿಭಟನೆಯಲ್ಲಿ ಪುರಸಭಾಧ್ಯಕ್ಷ ನಾಗೇಂದ್ರ , ಉಪಾಧ್ಯಕ್ಷೆ ಮಂಜುಳಾ, ಹಾಲುವಾಗಿಲು ಸ್ವಾಮಿ , ರಂಗಸ್ವಾಮಿ ಮಮತಾಜ್, ನಾರಾಯಣ್, ಆಕಾಶ್ ಪಾಳೆಗಾರ್ ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
Comments
Post a Comment