ತಾಲೂಕಿನಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ "ಶಾಕ್" ಕೊಟ್ಟ ಜೆಡಿಎಸ್ ಮುಖಂಡರು..!
ಕುಣಿಗಲ್ : ತಾಲೂಕಿನ ಭಾಗದಲ್ಲಿ ಪಂಪ್‌ಸೆಟ್‌ಗಳಿಗೆ, ಸಮರ್ಪಕ ವಾಗಿ ವಿದ್ಯುತ್ ಪೂರೈಸುವಂತೆ ಜೆ.ಡಿ.ಎಸ್ ಪಕ್ಷದಮುಖಂಡರು ಹಾಗೂ ಕಾರ್ಯಕರ್ತರು ವಿತರಣಾ ಬೆಸ್ಕಾಂ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಬಿ.ಎನ್ ಜಗದೀಶ್ ರವರು ನಿಗದಿತ ವಿದ್ಯುತ್ ಸರಬರಾಜು ಅನುವು ಮಾಡಿಕೊಟ್ಟಿದ್ದರು ಅದನ್ನು ಮರೆತು ಅಸಮರ್ಪಕವಾಗಿ ವಿದ್ಯುತ್ ನೀಡುತ್ತಿರುವ ಬಗ್ಗೆ ಇನ್ನು ನಾಲ್ಕು ದಿನಗಳಲ್ಲಿ ರೈತರಿಗೆ ನಿಗದಿಪಡಿಸಿದ 3 ಪೇಸ್ ವಿದ್ಯುತ್ತನ್ನು ಸಮರ್ಪಕವಾಗಿ ನೀಡದಿದ್ದರೆ ತಮ್ಮ ಇಲಾಖೆಯ ವಿರುದ್ಧ ತೀವ್ರವಾದ ಹೋರಾಟವನ್ನು ಮಾಡಲಾಗುತ್ತದೆ ಈಗಾಗಲೇ ಕೊರೋನಾ ಮಹಾಮಾರಿ ಎರಡನೇ ಹಂತದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಹೆಚ್ಚು ಜನರು ಗುಂಪು ಸೇರಿ ಪ್ರತಿಭಟನೆ ಮಾಡುವುದಕ್ಕೆ ತಾವು ಆಸ್ಪದ ಕೊಡದೆ ಈಗಿರುವ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಇಲಾಖೆ ಮುಖ್ಯಸ್ಥರಾದ ತಾವು ಮತ್ತು ತಮ್ಮ ಇಲಾಖೆಯ ಜವಾಬ್ದಾರಿಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿರಂತರ ವಿದ್ಯುತ್ ಪೂರೈಸಬೇಕು. ಅವೈಜ್ಞಾನಿಕ ಲೋಡ್ ಶೆಡ್ಡಿಂಗ್‌ನಿಂದಾಗಿ ರೈತರು ವರ್ಷವಿಡೀ ಬೆಳೆದ ಬೆಳೆ ಒಣಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರುಗಳಾದ ಹರೀಶ್ ನಾಯಕ್, ಹರೀಶ್ ಮಾರುತಿ ನಾಗಣ್ಣ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.
Comments
Post a Comment