ಅಮೃತೂರು ಹೋಬಳಿಯಲ್ಲಿ ಮತ್ತೆ ಚಿರತೆ ದಾಳಿ.!
ಅಮೃತೂರು: ತಾಲೂಕಿನ ಅಮೃತೂರು ಹೋಬಳಿಯ ಹನುಮಾಪುರ ಗ್ರಾಮದಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ಒಂದು ಕುರಿಯನ್ನು ಹೊತ್ತು ತಿಂದಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಸುಮಾರು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ದಾಳಿ ಮಾಡಿದ್ದು, 1 ಕುರಿಗಳನ್ನು ಕೊಂದು ಹಾಕಿದೆ.
ಹನುಮಾಪುರ ಗ್ರಾಮದ ಶ್ರೀನಿವಾಸ್ ಎಂಬವರಿಗೆ ಸೇರಿದ ಕುರಿ ಕಾಡಶೆಟ್ಟಿಹಳ್ಳಿ - ಹನುಮಾಪುರ ನಡುವೆ ಇರುವ ತೊರೆ ಸೇತುವೆ ಬಳಿ ಈ ಘಟನೆ ಸಂಭವಿಸಿದೆ.
ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
Comments
Post a Comment