ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್..!
ಕುಣಿಗಲ್ : ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ದೈನಂದಿನ ಅಗತ್ಯ ವಸ್ತುಗಳ ನಿರಂತರ ಬೆಲೆಯೇರಿಕೆಯಿಂದ ದೇಶದ ಜನತೆಯ ಬದುಕು ದುಸ್ತರವಾಗಿದೆ. ಬಡ ಮತ್ತು ಮಧ್ಯಮ ವರ್ಗಗಳು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇವೆಲ್ಲಾ ವಿಚಾರಗಳನ್ನು ಒಳಗೊಂಡಂತೆ ಇಂದು ಕುಣಿಗಲ್ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಡಾ.ರಂಗನಾಥ್ ರವರು ಸೈಕಲ್ ಜಾಥಾ ಮೂಲಕ ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಂಗನಾಥ್ ಕೇಂದ್ರ ಸರ್ಕಾರ ರೈತರು ಹಾಗೂ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ದಿನೇದಿನೇ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದೆ ಇದು ರೈತರಿಗೆ ಮಾರಕವಾಗಿದೆ ತಾವು ಉಳುಮೆ ಮಾಡುವ ಟ್ರ್ಯಾಕ್ಟರ್ ನಿಂದ ಹಿಡಿದು ರಸಗೊಬ್ಬರದ ಖರೀದಿಯ ವರೆಗೂ ಎಲ್ಲ ಬೆಲೆ ಗಗನಕ್ಕೇರಿದೆ ಹಾಗೂ ಜನಸಾಮಾನ್ಯರು ಪ್ರತಿದಿನ ಬಳಸುವ ದಿನನಿತ್ಯ ವಸ್ತುಗಳು ಕೂಡ ಗಗನಕ್ಕೇರಿರುವುದು ಬಡವರಿಗೆ ನುಂಗಲಾರದ ತುತ್ತಾಗಿದೆ ಕೇಂದ್ರ ಸರ್ಕಾರವು ಬಡವರನ್ನ ರಕ್ಷಿಸುವಲ್ಲಿ ವಿಫಲವಾಗಿದೆಯೆಂದು ಹರಿಹಾಯ್ದರು
Comments
Post a Comment